ಕರೋನಾ ಎಂದರೇನು ಮತ್ತು ಅದರ ಬಗ್ಗೆ ನಾನು ಏನು ಮಾಡಬಹುದು?

ಕರೋನವೈರಸ್ ಅಥವಾ ಕರೋನಾ ಒಂದು ಸಣ್ಣ ಸೂಕ್ಷ್ಮಾಣು (ಬರಿಗಣ್ಣಿನಿಂದ ನೋಡಲು ತುಂಬಾ ಚಿಕ್ಕದಾಗಿದೆ). ಇದು ಜನರಲ್ಲಿ ಹರಡಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಕರೋನಾ ಜ್ವರ ತರಹದ ರೋಗಲಕ್ಷಣಗಳಾದ ಒಣ ಕೆಮ್ಮು, ಉಸಿರಾಟದ ತೊಂದರೆ, ಜ್ವರ ಮತ್ತು ದೇಹದ ನೋವು ಉಂಟುಮಾಡುತ್ತದೆ. ಕರೋನಾ ಹೆಚ್ಚಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಕರೋನಾ ವೈರಸ್ ಅಪಾಯಕಾರಿಯಲ್ಲ ದಿದ್ದರೂ, ನ್ಯುಮೋನಿಯಾಕ್ಕೆ ಕಾರಣವಾಗಬಹುದು ಮತ್ತು ತೀವ್ರ ಪ್ರಕರಣಗಳಲ್ಲಿ ಮಾರಕವಾಗಬಹುದು.

ಕೊರೋನಾ ಯಾರಿಗಾದರು ತಗಲಬಹುದು. ವಯಸ್ಸಾದವರು ಮತ್ತು ಈಗಾಗಲೇ ಕಾಯಿಲೆ ಇಂದ ಬಳಲುತಿರುವವರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಉದಾಹರಣೆಗೆ ಉಸಿರಾಟದ ಕಾಯಿಲೆ, ಕ್ಯಾನ್ಸರ್ ಅಥವಾ ಮಧುಮೇಹ ರೋಗಿಗಳು.
ಸೋಂಕಿತ ವ್ಯಕ್ತಿಯು ಉಸಿರಾಡುವಾಗ, ಕೆಮ್ಮುವಾಗ ಅಥವಾ ಸೀನುವಾಗ ಬಿಡುಗಡೆಯಾದ ಹನಿಗಳಿಂದ ಕರೋನಾ ಹರಡುತ್ತದೆ.ಜನರು, ಆಹಾರ ಹಾಗು ವಸ್ತುಗಳ ಮೇಲೆ ಬಿದ್ಧ ಹನಿಗಳಿಂದ ಕರೋನಾ; ಬಾಯಿ, ಮೂಗು ಮತ್ತು ಕಣ್ಣುಗಳ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ದೇಹದಲ್ಲಿ, ಅದು ಗುಣಿಸಿ ಇತರ ದೇಹದ ಭಾಗಗಳಿಗೆ ಹರಡಲು ಪ್ರಾರಂಭಿಸುತ್ತದೆ. ಅನಾರೋಗ್ಯದ ಬಾಹ್ಯ ಚಿಹ್ನೆಗಳು ಕಾಣಿಸಿಕೊಳ್ಳುವ ಮೊದಲು ಕರೋನಾ ದೇಹದಲ್ಲಿ 14 ದಿನಗಳವರೆಗೆ ಬದುಕಬಲ್ಲದು. ಆದ್ದರಿಂದ ಜನರು ಕರೋನಾವನ್ನು ಹೊಂದಿದ್ದರುಅವರಿಗೆ ತಿಳಿಯದೆ, ವೈರಸಅನ್ನು ಇತರರಿಗೆ ಹರಡಬಹುದು.

ಸೋಂಕನ್ನು ತಡೆಗಟ್ಟಲು, ಕೈಗಳನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ. ನಿಮ್ಮ ಕೈಗಳ ಸ್ವಚ್ಛವಾಗಿ ಕಂಡರೂ, ಸೋಪಿನಿಂದ 20 ಸೆಕೆಂಡುಗಳ ಕಾಲ ನೀರಿನಲ್ಲಿ ಉಜ್ಜಿ ತೊಳೆಯಿರಿ.ಉಗುರುಗಳ ಕೆಳಗೆ, ಸಂಪೂರ್ಣ ಕೈ ಮತ್ತು ಮಣಿಕಟ್ಟು ಸ್ವಚ್ಛವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಸೋಪ್ ಮತ್ತು ನೀರಿನಿಂದ ತೊಳೆಯುವುದರಿಂದ ನಿಮ್ಮ ಕೈಯಲ್ಲಿರುವ ವೈರಸ್‌ ಸಾಯುತ್ತವೆ. ಆಹಾರವನ್ನು ತಯಾರಿಸುವ ಮೊದಲು, ತಯಾರಿಸುವಾಗ, ಶೌಚಾಲಯದ ಬಳಕೆಯ ನಂತರ, ತಿನ್ನುವ ಮೊದಲು, ರೋಗಿಗಳನ್ನು ನೋಡಿಕೊಳ್ಳುವಾಗ, ಪ್ರಾಣಿಗಳನ್ನು ಅಥವಾ ಪ್ರಾಣಿಗಳ ತ್ಯಾಜ್ಯವನ್ನು ಮುಟ್ಟಿದ ನಂತರ ಕೈ ತೊಳೆಯುವುದು ಮರೆಯಬೇಡಿ.

ಕೆಮ್ಮು, ಸೀನು , ಮೂಗು ಒರೆಸಿದ ನಂತರ ಕೈ ತೊಳೆಯಿರಿ. ನಿಮ್ಮ ಕೈಗಳನ್ನು ತೊಳೆಯದೆ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬೇಡಿ. ಜ್ವರ ,ಕೆಮ್ಮು ಅಥವಾ ಇತರ ಉಸಿರಾಟದ ಲಕ್ಷಣಗಳನ್ನು ಹೊಂದಿರುವವರ ನಿಕಟ ಸಂಪರ್ಕ ತಪ್ಪಿಸಿ. ನಿಮ್ಮ ಮತ್ತು ಕೆಮ್ಮು, ಸೀನುವವರ ನಡುವೆ ಕನಿಷ್ಠ 1 ಮೀಟರ್ (3 ಅಡಿ) ಅಂತರವನ್ನು ಕಾಪಾಡಿಕೊಳ್ಳಿ.ಕೆಮ್ಮುವಾಗ ಅಥವಾ ಸೀನುವಾಗ, ಯಾವಾಗಲೂ ನಿಮ್ಮ ಬಾಯಿ ಮತ್ತು ಮೂಗನ್ನು ನಿಮ್ಮ ಮೊಣಕೈಯಿಂದ ಅಥವಾ ಟಿಶ್ಶೂವಿನಿಂದ ಮುಚ್ಚಿ. ಬಳಸಿದ ಟಿಶ್ಶೂವನ್ನು ತಕ್ಷಣ ತ್ಯಜಿಸಿ. ಸಾರ್ವಜನಿಕ ಜಾಗಗಳಲ್ಲಿ ಉಗುಳಬೇಡಿ.
ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇರುವ ವ್ಯಕ್ತಿಯನ್ನು ನೀವು ನೋಡಿಕೊಳ್ಳಬೇಕಾದರೆ, ರಕ್ಷಣಾತ್ಮಕ ಮಾಸ್ಕ್ ಅಥವಾ ಬಟ್ಟೆಯ ಮಾಸ್ಕ್ ಧರಿಸಲು ಮರೆಯಬೇಡಿ. ಖಂಡಿತವಾಗಿ ಕೈ ಸ್ವಚ್ಛತೆಯನ್ನು ಪಾಲಿಸಿ.
ಕರೋನಾ ಮತ್ತು ಇತರ ವೈರಸ್‌ಗಳನ್ನು ಜನರ ಕೈಕುಲುಕಿದ ನಂತರ ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಿಕೊಳ್ಳುವ ಮೂಲಕ ರವಾನಿಸಬಹುದು. ಆದ್ದರಿಂದ ಇತರರನ್ನು ಭೇಟಿಯಾದಾಗ, ಕೈಕುಲುಕುವ, ತಬ್ಬಿಕೊಳ್ಳುವ ಅಥವಾ ಚುಂಬಿಸುವ ಮೂಲಕ ಸ್ವಾಗತಿಸಬೇಡಿ. ಬದಲಾಗಿ ಎರಡು ಕೈ ಜೋಡಿಸಿ ನಮಸ್ಕರಿಸಿ, ಕೈ ಬೀಸಿ ಅಥವಾ ತಲೆ ಆಡಿಸಿ ಜನರನ್ನು ಸ್ವಾಗತಿಸಿ.

ನಿಮ್ಮ ಪ್ರದೇಶದಲ್ಲಿ ಕರೋನಾ ಇದೆ ಎಂದು ನೀವು ಭಾವಿಸಿದರೆ, ಇತರರೊಂದಿಗೆ ಸಂಪರ್ಕವನ್ನು ತಪ್ಪಿಸಲು ಮನೆಯಲ್ಲಿಯೇ ಇರಿ. ನಿಮಗೆ ತಲೆನೋವು ಅಥವಾ ನೆಗಡಿಯಂತಹ ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ ನೀವು ಚೇತರಿಸಿಕೊಳ್ಳುವವರೆಗೂ ಮನೆಯಲ್ಲಿಯೇ ಇರಿ. ನೀವು ಸೀನುತ್ತಿದ್ದರೆ, ನಿಮಗೆ ಒಣ ಕೆಮ್ಮು, ಉಸಿರಾಟದ ತೊಂದರೆ ಮತ್ತು ಜ್ವರ ಇದ್ದರೆ, ವೈದ್ಯಕೀಯ ಸಹಾಯವನ್ನು ಬೇಗನೆ ಪಡೆಯಿರಿ. ಇದು ಉಸಿರಾಟದ ಸೋಂಕು ಅಥವಾ ಇತರ ಗಂಭೀರ ಸ್ಥಿತಿಯ ಕಾರಣದಿಂದಾಗಿರಬಹುದು.

ಕರೋನದ ಬಗ್ಗೆ ಸುಳ್ಳು ಮಾಹಿತಿ ಮತ್ತು ವದಂತಿಗಳು ತುಂಬಾ ಅಪಾಯಕಾರಿ, ಹಾಗು ಇದು ಜನರ ಸಾವಿಗೆ ಕಾರಣವಾಗಬಹುದು. ಉದಾಹರಣೆಗೆ, ಬ್ಲೀಚ್ ಅಥವಾ ಆಲ್ಕೋಹಾಲ್ ಕುಡಿಯುವುದರಿಂದ ಕರೋನಾವನ್ನು ತಡೆಗಟ್ಟಲು ಸಾಧ್ಯವಿಲ್ಲ, ಬದಲಿಗೆ ನಿಮ್ಮ ಜೀವಕ್ಕೇ ಹಾನಿಯಾಗುತ್ತದೆ. ಸ್ನೇಹಿತರು ಅಥವಾ ಆಪ್ತ ಸಂಬಂಧಿಕರಿಂದ ಪಡೆದ ಮಾಹಿತಿಯು ಕೂಡ ತಪ್ಪಾಗಿರಬಹುದು. ನಿಮ್ಮ ಸ್ಥಳೀಯ ಆರೋಗ್ಯ ಪ್ರಾಧಿಕಾರ ತಿಳಿಸುವ ಸಾರ್ವಜನಿಕ ಆರೋಗ್ಯ ಸಲಹೆಯನ್ನು ಮಾತ್ರ ಅನುಸರಿಸಿ.

ಈ ಸಂದೇಶವನ್ನು ಎಲ್ಲರಿಗು ತಿಳಿಸುವ ಮೂಲಕ ನೀವು ಕರೋನ ವಿರುದ್ಧ ಹೋರಾಡಲು ಸಹಾಯ ಮಾಡಬಹುದು. ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಹಂಚಿಕೊಳ್ಳಿ, ಜೊತೆಗೆ ಇದನ್ನು ಪ್ರಚಾರ ಮಾಡಲು ವಾಟ್ಸಾಪ್ ನಂತಹ ಸಂದೇಶ ಸೇವೆ ಬಳಸಿ.

ಈ ವಿಷಯವನ್ನು ಆಡಿಯೊಪೀಡಿಯಾ ಯೋಜನೆ, make health knowledge audible ಒದಗಿಸಿದೆ. www.audiopedia.org ನಲ್ಲಿ ಇದರ ಬಗ್ಗೆ ಇನ್ನಷ್ಟು ತಿಳಿಯಿರಿ. ನಮಸ್ಕಾರ.